ಎರಡನೇ ಹಂತದ ನವೀಕರಣ ಕಾಮಗಾರಿಗಳು

"ಸುತ್ತ ಪೌಳಿ"ಗಳ ನವೀಕರಣ: ದೇವಾಲಯದ ಸುತ್ತು ಪೌಳಿಗಳು ಕೆಲವೆಡೆ ಶಿಥಿಲವಾಗಿವೆ. ಅವುಗಳನ್ನು ನವೀಕರಿಸಲು ಉದ್ದೇಶಿಸಲಾಗಿದ್ದು ಅದಕ್ಕೆ ಸುಮಾರು ೧೦ ಲಕ್ಷ ರೂ ಗಳ ವೆಚ್ಚವನ್ನು ಅಂದಾಜಿಸಲಾಗಿದೆ. 

 
ರಾಜಗೋಪುರಗಳ ನಿರ್ಮಾಣ: ಕ್ಷೇತ್ರದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಸುತ್ತು ಗೋಪುರಗಳ ಹೊರಭಾಗದಲ್ಲಿ ಸುಂದರ ಕೆತ್ತನೆ ಕೆಲಸಗಳಿದೊಡಗೂಡಿದ ಕಲಾತ್ಮಕವಾದ ಶಿಲಸ್ತಂಭಗಳನ್ನೊಳಗೊಂಡ ಎರಡು ರಾಜಗೋಪುರಗಲನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.ಇದಕ್ಕೆ ೨ ಕೋಟಿ ರೂ ಗಳ ಖರ್ಚು ತಗಲಬಹುದಾಗಿದೆ. 
 
ಪಾಕಶಾಲೆ,ಭೋಜನಶಾಲೆ, ಅತಿಥಿ ಗೃಹಗಳ ನಿರ್ಮಾಣ: ಮಧೂರು ಕ್ಷೇತ್ರವೂದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಒಂದು ಮಹಾ ಕ್ಷೇತ್ರವಾಗಿದ್ದು, ಭಕ್ತ ಜನರ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ಉಂಟಾಗಿರುವುದರಿಂದ ಈಗಿರುವ ಪಾಕ ಶಾಲೆಯು ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಅತ್ಯಧುನಿಕ ಸವಲತ್ತುಗಳನ್ನೊಳಗೊಂಡ ವಿಸ್ತಾರವಾದಪಾಕಶಾಲೆ ಮತ್ತು ಭೋಜನ ಶಾಲೆಗಳು ಅತ್ಯಗತ್ಯವಾಗಿದೆ ಮಾತ್ರವಲ್ಲ ದೂರದ ಊರುಗಳಿದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಕೊರತೆ ಎಂಬುದನ್ನು ಮನಗಂಡು, ವಿನೂತನ ವಾಸ್ತು ಶೈಲಿಯ ಸುಂದರವಾದ ಅತಿಥಿ ಗೃಹವನ್ನೂ ಒಳಗೊಡ ೨೦೦೦೦ ಚದರ ಅಡಿ ವಿಸ್ತಿರ್ಣದ ರಡು ಅಂತಸ್ತಿನ ಕಟ್ಟಡವೊಂದನ್ನು ಸುಮಾರು ೨.೨ ಕೋಟಿ ರೂ ಗಳ ವೆಚ್ಚದಲ್ಲಿ  ನಿರ್ಮಿಸಲು ಉದ್ದೇಶಿಸಲಾಗಿದೆ. 
 
ಯಾಗಶಾಲೆ: ಶ್ರೀ ಕ್ಷೇತ್ರದಲ್ಲಿ ಪ್ರತ್ಯೇಕ ಯಾಗಶಾಲೆಯೊಂದರ ಅಗತ್ಯವಿದ್ದು ದೇವಾಲಯದ ದಕ್ಷಿಣ ಭಾಗದಲ್ಲಿ ಸುಮಾರು ೨೦ ಲಕ್ಷ ವೆಚ್ಚ ತಗಲುವ ಎಲ್ಲ ಸೌಕರ್ಯಗಳಿರುವ ಯಾಗಶಾಲೆಯು ನಿರ್ಮಾಣವಾಗಲಿದೆ. 
  
ವೀರಭದ್ರ,ರಕ್ತೇಶ್ವರೀ ಗುಡಿಗಳು ಮತ್ತು ನಾಗಬನ: ವೀರಭದ್ರವ ಗುಡಿಯು ಈಗ ಶ್ರೀ ಕ್ಷೇತ್ರದ ಹೊರವಲಯದಲ್ಲಿದ್ದು ಅದನ್ನು ಅಲ್ಲಿಂದ ಸ್ಥಳಾಂತರಿಸಿ ಪ್ರಧಾನ ದೇವಾಲಯದ ಪಕ್ಕದಲ್ಲಿ ಪ್ರತಿಷ್ಠಾಪಿಸಬೇಕಾಗಿದೆ. ರಕ್ತೇಶ್ವರೀ ಗುಡಿಯನ್ನು ನವೀಕರಿಸಲೂ ಶ್ರೀ ನಾಗಬನಕ್ಕೆ ಯೋಗ್ಯ ಸಂರಕ್ಷಣೆಯನ್ನೊದಗಿಸಲೂ ಅದರ ಪಾವಿತ್ರ್ಯವನ್ನು ಕಪಾಡಿಕೊಂಡು ಬರುವುದಕ್ಕೂ ತಿರ್ಮಾನಿಸಲಾಗಿದ್ದು ಈ ಕಾರ್ಯಗಳಿಗೆ ೧೦ ಲಕ್ಷ ರೂ ಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ.