ದೇಣಿಗೆ ನೀಡಿ

ಭಕ್ತ ಬಾಂಧವರೇ.
ಅಡೂರು,ಮಧೂರು,ಕಾವು ಮತ್ತು ಕಣ್ಯಾರ (ಕಣಿಪುರ) ಕಂಬಳೆ ಸೀಮೇಯ ಅತಿ ಪುರಾತನ ಪ್ರಸಿದ್ಧವಾದ ದೇವಾಲಯಗಳಾಗಿದ್ದು ಪೌರಾಣಿಕ. ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಹಿಂದಿನಿಂದಲೂ ಅರಸರ ಆಡಳಿತಕ್ಕೊಳಪಟ್ಟಿತ್ತು. ಗುಡ್ಡಬೆಟ್ಟಗಳಿಂದಾವೃತವಾದ ವಿಶಾಲವಾದ ಬಯಲುಪ್ರದೇಶ ಮಧ್ಯೆ ಬಳುಕಿ ಸಾಗುವ ಮಧುವಾಹಿನಿ (ಕಾಶ್ಮೀರ) ಹೊಳೆಯ ಎಡದಂಡೆಯಲ್ಲಿ ಗಜಪೃಷ್ಠಾಕೃತಿಯ ಮೂರಂತಸ್ತಿನ ನಯನ ಮನೋಹರವಾದ ಭವ್ಯ ಮಂದಿರವು ತಲೆಯೆತ್ತಿ ನಿಂತಿದ್ದು,ಮೊದಲ ನೋಟದಲ್ಲೆ ನೋಡುಗರ ಮನಸೂರೆಗೋಡು ಭಕ್ತಿ ಭಾವವನ್ನು ಮೂಡಿಸುತ್ತದೆ. ದೇವಾಲಯದ ಔನ್ನತ್ಯ,ಕೀರ್ತಿಮುಖದ ವಿನ್ಯಾಸ ಮತ್ತು ದಾರು ಶಿಲ್ಪಗಳು ನಮ್ಮ ಪೂರ್ವಜರ ಕಲಾನೈಪುಣ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ದೇವಾಲಯದ ಒಳಭಾಗದಲ್ಲಿ ಮೇಲಿನ ಛಾವಣಿಗಳ ಆಧಾರ ಸ್ಥಂಭಗಳು ನಮ್ಮ ಪೂರ್ವಿಕರ ತಾಂತ್ರಿಕ ಪರಿಣಿತಿ ಮತ್ತು ವೃತ್ತಿಪರತೆಗೆ ಸಾಕ್ಷಿಯಾಗಿದೆ.ದೇವಾಲಯದ ಮೇಲಂತಸ್ತಿನ ಭಿತ್ತಿಗಳ ಹೊರಭಾಗದಲ್ಲಿ ಮೂಡಿಸಿದ ಉಬ್ಬುಶಿಲ್ಪಗಳು ಮನಮೋಹಕವಾಗಿದ್ದು ಅಪರೂಪದ ಶಿಲ್ಪಕಲಾ ಪ್ರಕಾರವಾಗಿದೆ.ನಮಸ್ಕಾರ ಮಂಟಪದ ಛಾವಣೆಯ ಒಳಭಾಗದಲ್ಲಿರುವ ಪುತ್ರಕಾಮೇಷ್ಠಿಯಿಂದ ಸೀತಾಸ್ವಯಂವರದವರೆಗಿನ ಕಥೆಯನ್ನು ಸಾರುವ ದಾರು ಶಿಲ್ಪವು ಅತ್ಯಂತ ಸುಂದರವು ಮನಮೋಹಕವೂ ಆಗಿದೆ. ಮಧೂರು ದೇವಾಲಯವು ತನ್ನದೇ ಆದ ಸ್ವಂತಿಕೆಯನ್ನು ಹೊಂದಿದ್ದು ಅದನ್ನು ನಮ್ಮ ಮುಂದಿನ ತಲೆಮಾರಿಗೆ ಕಾಪಿಡುವಷ್ಟು ಶ್ರೇಷ್ಠವಾಗಿದ್ದು ಅತ್ಯಂತ ಮೌಲ್ಯಯುತವಾಗಿದೆ. ಕೆಲವು ವಿದೇಶೀ ಸಂದರ್ಶಕರ ಹೇಳಿಕೆಯ ಪ್ರಕಾರ ವಿಶ್ವಪರಂಪರೆಗೆ ಸರಿಗಟ್ಟುವಂತಹವುಗಳಾಗಿವೆ."ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು" ಎಂಬ ಕವಿವಾಣಿಯು ಈ ದೇವಾಲಯಕ್ಕೆ ಅನ್ವರ್ಥವಾಗಿದೆ.
 ಮಧೂರಿನಲ್ಲಿ ಪ್ರಧಾನ ಪ್ರತಿಷ್ಠೆ ಶ್ರೀ ಮದನಂತೇಶ್ವರನದಾಗಿದ್ದರೂ ವಿಘ್ನನಿವಾರಕನಾದ ಮಹಾಗಣಪತಿಯಿಂದಾಗಿ ಈ ದೇವಾಲಯವು ಖ್ಯಾತಿಯನ್ನು ಪಡೆದಿದೆ. ಇಲ್ಲಿ ಕಾಶೀವಿಶ್ವನಾಥ, ಹಂಸರೂಪೀ ಸದಾಶಿವ, ಶ್ರೀ ಧರ್ಮಶಾಸ್ತಾ, ಶ್ರೀ ದುರ್ಗಾಪರಮೇಶ್ವರೀ,ಶ್ರೀ ಸುಬ್ರಹ್ಮಣ್ಯ ಮತ್ತು ವೀರಭದ್ರನಿಗೆ ಪ್ರತ್ಯೇಕ ಆಲಯಗಳಿವೆ.

ಎಲ್ಲಾ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಭಕ್ತ ಮಹನೀಯರ ಸರ್ವವಿಧದ ಸಹಕಾರ ಅಗತ್ಯವಿದ್ದು ಆಸ್ತಿಕ ಬಾಂಧವರು ಉದಾರ ದೇಣಿಗೆಯನ್ನು ನೀಡಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ಶ್ರೀ ದಾನಮಾರ್ತಾಂಡವರ್ಮರಾಜ
ರಾಮಂತರಸುಗಳು XIII
ಆನುವಂಶಿಕ ಮೋಕ್ತೇಸರರು

ಶ್ರೀ ಯು. ತಾರಾನಾಥ್ ಆಳ್ವ
ಅಧ್ಯಕ್ಷರು ಮತ್ತು
ಸದಸ್ಯರು, ನವೀಕರಣ ಸಮಿತಿ


ಕಾರ್ಯನಿರ್ವಹಣಾಧಿಕಾರಿ ಮತ್ತು ನೌಕರ ವರ್ಗ
ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ
ಮಧೂರು, ಕಾಸರಗೋಡು, ಕೇರಳ


ದೇವಸ್ಥಾನದ ಜೀರ್ಣೋಧ್ಧಾರಕ್ಕಾಗಿ ದೇಣಿಗೆ ನೀಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದು.
ಕೆನರಾ ಬ್ಯಾಂಕ್, ಬ್ಯಾಂಕ್ ರಸ್ತೆ, ಕಾಸರ್ಗೋಡು ಶಾಖೆ
SB A/C NO: 0711101070136 (IFSC-CNRB0000711)


         ಅಥವಾ
ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್, ಮಧೂರು ಶಾಖೆ
SB A/C NO: 18137070946