ನವೀಕರಣ ಸಮಿತಿ

2010ನೇ ಇಸವಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ಒಂದು ಪುನರ್ನವೀಕರಣ ಸಮಿತಿಯನ್ನು ರಚಿಸಿತು. ಕರ್ನಾಟಕ ರಾಜ್ಯದ ಪೂರ್ವ ಕನ್ಸರ್ವೇಟರ್ ಆಫ್ ಫಾರೆಸ್ಟ್ ಆಗಿದ್ದ ಶ್ರೀ.ಯು. ತಾರಾನಾಥ ಆಳ್ವರು ಇದರ ನೇತೃತ್ವ ವಹಿಸಿರುವರು. ಈ ಸಮಿತಿಯಲ್ಲಿ 40 ಸದಸ್ಯರಿದ್ದಾರೆ. ದೇವಳದ ಕಾರ್ಯ ನಿರ್ವಹಣಾಧಿಕಾರಿಯ ಸಮಿತಿಯ ಕೋಶಾಧಿಕಾರಿಯಾಗಿರುತ್ತಾರೆ.


ದೇವಳದ ಭಕ್ತಾದಿಗಳು ಹಾಗೂ ಹಿತ ಚಿಂತಕರು ಈ ಮಹಾತ್ಕಾರ್ಯದಲ್ಲಿ ಪಾಲ್ಗೊಂಡು ಉದಾರ ಧನಸಹಾಯ ಮಾಡುವ ಮೂಲಕ ತಮ್ಮನ್ನು ಬಲಪಡಿಸಬೇಕೆಂದು ನವೀಕರಣ ಸಮಿತಿಯು ವಿನಂತಿಸುತ್ತದೆ. ಭಕ್ತಾದಿಗಳು ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕು. ಯಾವುದೇ ಒಂದು ಕಾರ್ಯ ಭಾಗಶಃ ಅಥವಾ ಸಂಪೂರ್ಣ ಪ್ರಾಯೋಜಕತ್ವವನ್ನು ಭಕ್ತಾಧಿಗಳು ವಹಿಸುವುದನ್ನು ಸಮಿತಿಯು ಸ್ವಾಗತಿಸುತ್ತದೆ. ಭಕ್ತಾದಿಗಳು  ಈ ಕೆಳಗಿನ ವಿಳಾಸದಲ್ಲಿ ಪುನರ್ನವೀಕರಣ ಸಮಿತಿಯನ್ನು ಸಂಪರ್ಕಿಸಬಹುದು.

ನವೀಕರಣ ಸಮಿತಿ, ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು ಅಂಚೆ, ಕಾಸರಗೋಡು, 671124. ದೂರವಾಣಿ- 04994/ 24399
ಇ- ಅಂಚೆ: ಇನ್ ಫೊ @ ಮಧೂರು ಟೆಂಪಲ್ ರಿನೋವೇಶನ್. ಕಾಂ.

ಬ್ಯಾಂಕು ಖಾತೆಗಳು :
1. ಕೆನರಾ ಬ್ಯಾಂಕ್, ಬ್ಯಾಂಕ್ ರಸ್ತೆ, ಕಾಸರಗೋಡು, ಎಸ್,ಬಿ,ಖಾತೆ- 0711101070136
2. ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್ , ಮಧೂರು ಶಾಖೆ, ಮಧೂರು, ಕಾಸರಗೋಡು.
ಎಸ್.ಬಿ.ನಂಬರ್ - 18137070946