ಪೂಜೆಗಳು ಹಾಗೂ ಹರಕೆಗಳು:

ಸಾಮಾನ್ಯವಾಗಿ ಭಕ್ತಾದಿಗ¼ÀÄ ಇಲ್ಲಿ "ಉದಯಾಸ್ತಮಾನ ಪೂಜೆಯ' ಮೂಲಕ ಗಣಪತಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸೇವೆಯನ್ನು ನಡೆಸುವವರಿಗೆ ಅತ್ಯಂತ ಸ್ವಾದಿಷ್ಟವಾದ ಅಪ್ಪ ಪ್ರಸಾದವನ್ನು ನೀಡಲಾಗುತ್ತದೆ. ಇದು ಪ್ರತಿದಿನವೂ ತಯಾರಿಸಲಾಗುತ್ತಿದ್ದು, ಸೇವಾದಾರರಿಗೆ ಪ್ರಸಾದದ ಕೌಂಟರ್ನಲ್ಲಿ ಲಭ್ಯವಿರುತ್ತದೆ. ವಿಶೇಷ ಪೂಜೆಗಳಲ್ಲಿ ಪ್ರಮುಖವಾದದ್ದು "ಸಹಸ್ರಪ್ಪ" (ಸಾವಿರ ಅಪ್ಪ) ಸೇವೆ. ಇದು ಒಂದು ಸಾವಿರ ಅಪ್ಪಗಳ ಸಮರ್ಪಣೆಯ ಸೇವೆ. ಇನ್ನೊಂದು ಅತಿ ವಿಶಿಷ್ಟ ಸೇವೆಯೆಂದರೆ ಗಣಪತಿಯ ವಿಗ್ರಹವನ್ನು ಅಪ್ಪಗಳಿಂದ ಮುಚ್ಚುವ "ಮೂಡಪ್ಪ ಸೇವೆ". ಇದು ಸಾಮಾನ್ಯವಾಗಿ ಸಾಂಘಿಕವಾಗಿ ನಡೆಸುವ ಸೇವೆ. ಇದು ದೊಡ್ಡ ವೆಚ್ಚ ಬರುವ ಸೇವೆಯಾದುದರಿಂದ ಅತ್ಯಂತ ಅಪೂರ್ವವಾಗಿ ನಡೆಯುತ್ತದೆ. ೧೬೦ ವರ್ಷಗಳ ನಂತರ ೧೯೬೨ ರಲ್ಲಿ ಹಾಗೂ ಮುಂದೆ ೧೯೯೨ ರಲ್ಲಿ ಈ ಸೇವೆಯನ್ನು ಸಂಭ್ರಮದಿಂದ ನಡೆಸಲಾಯಿತು.