ಮೊದಲ ಹಂತದ ಕಾಮಗಾರಿಗಳು

ಗರ್ಭಗುಡಿ (ಪ್ರಧಾನ ದೇಗುಲ): ಈಗಿರುವ ಬೃಹತ್ತಾದ ಅತಿ ಸುಂದರವಾದ ಪ್ರಧಾನ ದೇಗುಲವು ಸುಮಾರು ೬೫೦ ವರ್ಷಗಳ ಹಿಂದಿನ ಒಂದು ಅಪೂರ್ವ ಕಲಾಕೃತಿಯಾಗಿದೆ. ಇದರ ಆಧಾರ ಸ್ತಂಭಗಳೂ ಮೇಛ್ಛಾವಣಿಗಳು ಕೀರ್ತಿ ಮುಖಗಳೂ ಶಿಥಿಲವಾಗಿದ್ದು ಅದನ್ನು ನಮೀಕರಿಸಲೇ ಬೇಕಾಗಿದೆ. ಇದರ ಮೂಲ ಸ್ವರೂಪಕ್ಕೆ ಚ್ಯುತಿಬಾರದಂತೆ ಅದೇ ವಿನ್ಯಾಸ ಮತ್ತು ಅಳತೆಯಲ್ಲಿ ಈಗಿರುವ ದೇವಸ್ಥಾನದ ಪಡಿಯಚ್ಚಿನಂತೆ ನಿರ್ಮಿಸುವ ಯೋಜನೆಯನ್ನು ನಮೀಕರಣ ಸಮಿತಿಯು ಹಮ್ಮಿಕೊಂಡಿದೆ. ಈ ಕಾಮಗಾರಿಗಳು ಅತಿ ಸೂಕ್ಷ್ಮವೂ ಬೃಹತ್ತಾದುದೂ ಆದುದರಿಂದ ಇದಕ್ಕೆ ವಿಷೇಶ ಪರಿಣಿತಿಯೂ ತಾಂತ್ರಿಕ ಕೌಶಲ್ಯವೂ ಅಗತ್ಯವಾಗಿದ್ದು   ೪.೩೫ ಕೋಟಿ ರೂ  ಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ. 

 
ಉಪದೇವತೇಗಳ ಗುಡಿಗಳು: ಪ್ರಧಾನ ಗರ್ಭಗುಡಿಯ ಸುತ್ತಲಿರುವ ಶ್ರೀ ಧರ್ಮ ಶಾಸ್ತಾರ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಹಂಸರೂಪಿ ಸದಾಶಿವ, ಶ್ರೀ ಕಾಶೀ ವಿಶ್ವನಾಥ ಗುಡಿಗಳ ಛಾವಣೆಗಳು (ಮಾಡು)ಶಿಥಿಲವಾಗಿದ್ದು ಹೊಸದಾಗಿ ಸಾಗುವಾನಿ ಮರ ಮತ್ತು ತಾಮ್ರದ ಮಾಡನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು,ಈ ಐದು ಗುಡಿಗಳ ನಿರ್ಮಾಣಕ್ಕೆ ಒಟ್ಟು  ೧.೫ ಕೋಟಿ ರೂ  ಗಳ ವೆಚ್ಚವನ್ನು ಅಂದಾಜಿಸಲಾಗಿದೆ.  
 
ನೈವೇದ್ಯ ಕೊಠಡಿ : ಈಗಿರುವ ನೈವೇದ್ಯ ಕೊಠಡಿಯು ಇಕ್ಕಟ್ಟಾಗಿರುವುದರಿಂದ ಇದನ್ನು  ವಿಸ್ತರಿಸಬೇಕಾದ ಅಗತ್ಯವಿದೆ. ಇದನ್ನು ಸಾಗುವಾನಿ ಮರ ಮತ್ತು ತಾಮ್ರದ ಮಾಡಿನಿಂದ ಪುನರ್ ನಿರ್ಮಿಸಲು ನಿರ್ಧರಿಸಿದ್ದು ಅಂದಾಜು ೩೯,೫೫,೦೦೦ ಗಳ ವೆಚ್ಚ ತಗಲಬಹುದು. ಹೀಗೆ ಮೊದಲ ಹಂತದ ನಮೀಕರಣ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ತಿಗೊಳಿಸಲು ನಿರ್ಧರಿಸಲಾಗಿದ್ದು ಒಟ್ಟು ೬.೨೫ ಕೋಟಿ ಗಳ ಖರ್ಚು ತಗಲಬಹುದು.