ಹಬ್ಬಗಳು ಹಾಗೂ ಉತ್ಸವಗಳು

ಗಣೇಶ ಚತುರ್ಥಿಯ ಹಬ್ಬ ಹಾಗೂ 'ಮಧೂರು ಬೆಡಿ' ಎಂದೇ ಪ್ರಸಿದ್ಧವಾದ ಇಲ್ಲಿನ ವಾರ್ಷಿಕ ಉತ್ಸವಗಳಿಗೆ ಊರ ಪರವೂರ ಭಕ್ತಾದಿಗಳು ಬಂದು ನೆರೆಯುತ್ತಾರೆ.

ಮಧೂರು ಬೆಡಿ ಐದು ದಿನಗಳ ವರ್ಣರಂಜಿತ ಉತ್ಸವ ನಾಲ್ಕನೆಯ ದಿನ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ವಿವಿಧ ಜಾನಪದ ಕಲೆಗಳ ಪ್ರದರ್ಶನ ಹಾಗೂ ಯಕ್ಷಗಾನ ಈ ಉತ್ಸವಕ್ಕೆ ಇನ್ನಷ್ಟು ಕಳೆ ಕಟ್ಟುತ್ತದೆ. ಉಳಿದಂತೆ, ನವರಾತ್ರಿ, ಧನುಪೂಜೆ, ದೀಪಾವಳಿ, ಷಷ್ಠಿ , ಶಿವರಾತ್ರಿ, ವಸಂತಪೂಜೆ, ಧವನ ಹಾಗೂ ವಿಷು ಹಬ್ಬಗಳನ್ನು ಆಚರಿಸಲಾಗುವುದು.