ಅವಿಸ್ಮರಣೀಯ ಘಟನೆಗಳು

1795- ಮಾಯಿಪ್ಪಾಡಿ ಅರಸರ ನೇತೃತ್ವದಲ್ಲಿ ಪ್ಥಮ ಮೂಡಪ್ಪ ಸೇವೆ.
1797- ಕೂಡ್ಲು ದೊಡ್ಡ ಸುಬ್ಬಯ್ಯ ಶ್ಯಾನುಭೋಗರ ನೇತೃತ್ವದಲ್ಲಿ ದ್ವಿತೀಯ ಮೂಡಪ್ಪ ಸೇವೆ.
1962- ಅಷ್ಟಬಂಧ ಹಾಗೂ ಬ್ರಹ್ಮಕಲಶ.
1962 ರ ಏಪ್ರಿಲ್ 6ರಿಂದ  10ರವರೆಗೆ ಆನುವಂಶಿಕ ಮೊಕ್ತೇಸರ ಶ್ರೀ ವೆಂಕಟೇಶ ಧರ್ಮರಾಜರ ಅಧಿಕಾರ ಪತ್ರ ಹೊಂದಿದ ಬಿ.ಎಸ್.ಕಕ್ಕಿಲ್ಲಾಯ ಹಾಗೂ ಶ್ರೀ ಸಿದ್ದಿವಿನಾಯಕ ಸೇವಾಸಂಘಗಳ ನೇತೃತ್ವದಲ್ಲಿ ತೃತೀಯ ಮೂಡಪ್ಪ ಸೇವೆ.
1965- 19 ಫೆಬ್ರವರಿ 1965ರಿಂದ 48 ದಿನಗಳ ಕಾಲ ಶ್ರೀ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕೋಟಿ ನಾಮಾರ್ಚನೆ.

1982- 17 ಅಕ್ಟೋಬರ್ 1982 ರಲ್ಲಿ ಶ್ರೀ ಮಹಾಗಣಪತಿ ಯಜ್ಞ
31 ಅಕ್ಟೋಬರ್ 1982 ರಲ್ಲಿ ನವಗ್ರಹ ಯಜ್ಞ
ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ರುದ್ರಯಾಗ.

1986- 21 ಜನವರಿ 1986 ರಿಂದ 28 ಜನವರಿ 1986 ರ ವರೆಗೆ ಋಕ್ ಸಂಹಿತಾಯಾಗ.
1992- ಅಷ್ಟಬಂಧ ಬ್ರಹ್ಮಕಲಶ.
4 ಏಪ್ರಿಲ್ 1992- ಅಂದಿನ ದೇವಾಲಯ (ಫಿಟ್ ಪರ್ಸನ್) ಆದ ಶ್ರೀ ಬಿ.ವಿ ಕಕ್ಕಿಲ್ಲಾಯ ಹಾಗೂ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವಾ ಸಮಿತಿಗಳ ನೇತೃತ್ವದಲ್ಲಿ ಚತುರ್ಥ ಮೂಡಪ್ಪ ಸೇವೆ.

2010- ಮಲಬಾರ್ ದೇವಸ್ವಂ ಬೋರ್ಡ್ ನಿಂದ ಶ್ರೀ .ಯು.ತಾರಾನಾಥ ಆಳ್ವರ ಅಧ್ಯಕ್ಷತೆಯಲ್ಲಿ ಪುನರ್ನವೀಕರಣ ಸಮಿತಿಯ ರಚನೆ.